iPhone 14 ನ್ನು ಅರ್ಧ ಬೆಲೆಗೆ ಖರೀದಿಸುವ ಸುವರ್ಣಾವಕಾಶ! ಅದೂ ಬ್ರಾಂಡ್ ನ್ಯೂ ಫೋನ್... ಸೆಕೆಂಡ್ ಹ್ಯಾಂಡ್ ಅಲ್ಲ

Apple iPhone 14: ಕಳೆದ ತಿಂಗಳಿನಲ್ಲಿ  ಭಾರತದಲ್ಲಿ ಐಫೋನ್ 14 ಸಿರೀಸ್ ಬಿಡುಗಡೆಯಾಗಿದೆ ಮತ್ತು ಈ ಸರದಿಯನ್ನು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಬಜೆಟ್ ಹೊಂದಿಸಲಾಗದ ಭಾರತೀಯ ಗ್ರಾಹಕರು, ಐಫೋನ್ 14 ಅನ್ನು ಕಡಿಮೆ ಬೆಲೆಗೆ ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ.  

Written by - Nitin Tabib | Last Updated : Oct 13, 2022, 06:26 PM IST
  • ಐಫೋನ್ 14 ಅನ್ನು ಅರ್ಧದಷ್ಟು ಬೆಲೆಗೆ ಖರೀದಿಸಲು ಒಂದೇ ಒಂದು ಮಾರ್ಗವಿದೆ.
  • ಅದನ್ನು ನೀವು ಬೇರೆ ದೇಶದ ಮಾರುಕಟ್ಟೆಯಿಂದ ಖರೀದಿಸಬಹುದಾಗಿದೆ.
  • ಹೌದು, ವಾಸ್ತವದಲ್ಲಿ ಕೆಲ ಗ್ರಾಹಕರು ದುಬೈನಲ್ಲಿರುವ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯದಿಂದ ಭಾರತಕ್ಕೆ ಐಫೋನ್ 14 ಅನ್ನು ಖರೀದಿಸುತ್ತಿದ್ದಾರೆ
iPhone 14 ನ್ನು ಅರ್ಧ ಬೆಲೆಗೆ ಖರೀದಿಸುವ ಸುವರ್ಣಾವಕಾಶ! ಅದೂ ಬ್ರಾಂಡ್ ನ್ಯೂ ಫೋನ್... ಸೆಕೆಂಡ್ ಹ್ಯಾಂಡ್ ಅಲ್ಲ title=
iPhone In Cheapest Rate

iPhone 14 Cheapest Price: ಐಫೋನ್ 14 ಸರಣಿಯು ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ, ಎಲ್ಲೆಡೆ ಭಾರಿ ಕ್ರೇಜ್ ಹುಟ್ಟುಹಾಕಿದೆ. ಐಫೋನ್ 14 ಖರೀದಿಸಲು ಗ್ರಾಹಕರಿಗೆ ಇರುವ ಆತುರತೆ, ಬೇರೆ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸುವಲ್ಲಿ ಕಾಣುವುದಿಲ್ಲ. ಐಫೋನ್ 14 ಸರಣಿಯಲ್ಲಿ ಅಗ್ಗದ ಸ್ಮಾರ್ಟ್‌ಫೋನ್ ಎಂದರೆ ಅದು ಐಫೋನ್ 14 ಆಗಿದೆ, ಇದರ ಬೆಲೆ ಸುಮಾರು ₹ 80000 ನಿಗದಿಪಡಿಸಲಾಗಿದೆ. ಈ ಬೆಲೆ ಅನೇಕ ಜನರ ಬಜೆಟ್‌ನಿಂದ ಹೊರಗಿರುತ್ತದೆ. ಈ ಬೆಲೆಯು ನಿಮ್ಮ ಬಜೆಟ್‌ಗೂ ಕೂಡ ಭಾರಿ ಎನಿಸುತ್ತಿದ್ದರೆ, ಐಫೋನ್ 14 ಅನ್ನು ಅರ್ಧದಷ್ಟು ಬೆಲೆಗೆ ಖರೀದಿಸುವ ವಿಧಾನವನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. 

ಇದನ್ನೂ ಓದಿ-ಸರ್ಕಾರದಿಂದ ಉಚಿತ ಸ್ಮಾರ್ಟ್‌ಫೋನ್! ಮೂರು ವರ್ಷದವರೆಗೆ ಇಂಟರ್ನೆಟ್ ಮತ್ತು ಕರೆ ಸೌಲಭ್ಯ ಕೂಡಾ ಫ್ರೀ

ಈ ಮಾರುಕಟ್ಟೆಯಿಂದ ಗ್ರಾಹಕರು ಖರೀದಿಸಬಹುದು
ಐಫೋನ್ 14 ಅನ್ನು ಅರ್ಧದಷ್ಟು ಬೆಲೆಗೆ ಖರೀದಿಸಲು ಒಂದೇ ಒಂದು ಮಾರ್ಗವಿದೆ. ಅದನ್ನು ನೀವು ಬೇರೆ ದೇಶದ ಮಾರುಕಟ್ಟೆಯಿಂದ ಖರೀದಿಸಬಹುದಾಗಿದೆ. ಹೌದು, ವಾಸ್ತವದಲ್ಲಿ ಕೆಲ ಗ್ರಾಹಕರು ದುಬೈನಲ್ಲಿರುವ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯದಿಂದ ಭಾರತಕ್ಕೆ ಐಫೋನ್ 14 ಅನ್ನು ಖರೀದಿಸುತ್ತಿದ್ದಾರೆ ಮತ್ತು ಇದಕ್ಕಾಗಿ ಅವರು ಕಡಿಮೆ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ನಾವು ಭಾರತೀಯ ಐಫೋನ್ 14 ಮಾದರಿಯ ಬೆಲೆಯ ಸುಮಾರು ಅರ್ಧದಷ್ಟು ಬೆಲೆಗೆ ಭಾರತೀಯ ಗ್ರಾಹಕರು, ದುಬೈ ಮಾದರಿಯನ್ನು ಪಡೆಯುತ್ತಿದ್ದಾರೆ. ಆದರೆ, ದುಬೈನಲ್ಲಿ ವಾಸಿಸುವುವರಿಂದ ಮಾತ್ರ ಅದನ್ನು ತರೆಸಿಕೊಂದರೆ ಮಾತ್ರ ಅದು ನಿಮಗೆ ಮಿತವ್ಯಯಕಾರಿಯಾಗಿದೆ, ಏಕೆಂದರೆ ನೀವು ಸ್ವತಃ ದುಬೈಗೆ ತೆರಳಿ ಐಫೋನ್ 14 ಅನ್ನು ಖರೀದಿಸಿದರೆ, ನೀವು ಐಫೋನ್‌ನ ವೆಚ್ಚವನ್ನು ಉಳಿಸಬಹುದು, ಆದರೆ ನಿಮ್ಮ ಪ್ರಯಾಣ ಮತ್ತು ವಸತಿ ವೆಚ್ಚಗಳನ್ನು ಇದರಲ್ಲಿ ಸೇರಿಕೊಳ್ಳುತ್ತವೆ.  ನಂತರ ಒಟ್ಟಾರೆಯಾಗಿ, ನೀವು ಭಾರತೀಯ iPhone 14 ನ ಬೆಲೆಗಿಂತ ಹೆಚ್ಚಿನ ಹಣ ಖರ್ಚು ಮಾಡಬೇಕಾಗಬಹುದು.

ಇದನ್ನೂ ಓದಿ-Diwali sale: ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಗೆ ಮುಗಿಬಿದ್ದ ಜನರು!

ವ್ಯತ್ಯಾಸವೇನು?
ದುಬೈ ಐಫೋನ್ ಮಾದರಿಯಲ್ಲಿ ನೀವು ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯದಿಂದ ನೀವು ಅದನ್ನು ಪಡೆದರೆ, ಅದು ನಿಮಗೆ ಲಾಭದಾಯಕ ವ್ಯವಹಾರವೆಂದು ಸಾಬೀತಾಗಬಹುದು, ಆದ್ದರಿಂದ ನೀವು ಈ ಆಯ್ಕೆಯನ್ನು ಹೊಂದಿದ್ದರೆ, ನಂತರ ನೀವು ಕಡಿಮೆ ಬೆಲೆಗೆ ಐಫೋನ್ ಖರೀದಿಸಿ ಬಳಸಬಹುದಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News