Fight On Wedding Day: ಮದುವೆ ವಧು-ವರರಿಗೆ ಸ್ಮರಣೀಯ ದಿನವಾಗಿದೆ. ಕೆಲವೊಮ್ಮೆ ಈ ಸ್ಮರಣೀಯ ಕ್ಷಣಗಳು ಕೆಟ್ಟ ಕ್ಷಣಗಳಾಗಿ ಬದಲಾಗುತ್ತವೆ. ಮದುವೆಯ ದಿನದಂದು ವಧು ಮತ್ತು ವರರ ಉತ್ತಮ ದಿನವು ವ್ಯರ್ಥವಾಗಿ ಹೋಗಬಹುದು. ನವ ದಂಪತಿಗಳ ಬಾಳಲ್ಲಿ ಸ್ಮರಣೀಯವಾಗಿರಬೇಕಾದ ಈ ದಿನ ಅವರ ಜೀವನದ ಕೆಟ್ಟ ಗಳಿಗೆಯಾಗಿ ಬದಲಾಗಿದೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ, ವಧು ಮತ್ತು ವರರು ಕೆಲವು ಕ್ಷುಲ್ಲಕ ವಿಷಯಗಳಿಗೆ ಪರಸ್ಪರ ಜಗಳವಾಡುವ ಮೂಲಕ ಮದುವೆಯನ್ನು ಹಾಳು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:Viral Video: ಚಪ್ಪಲಿ-ಬಾಟಲಿಯೇ ಆಯುಧ! ಯುವತಿಯ ಜಡೆಜಗಳಕ್ಕೆ ರಣರಂಗವಾಯ್ತು ಮೆಟ್ರೋ! ವಿಡಿಯೋ ವೈರಲ್
ವಿಡಿಯೋದ ಆರಂಭದಲ್ಲಿ, ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಸಂಪೂರ್ಣ ಸಂತೋಷದ ವಾತಾವರಣ ಅಲ್ಲಿದೆ. ಆಗ ಒಮ್ಮೆಂದೊಮ್ಮೆಲೆ ವರನು ವಧುವಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಕೋಪಗೊಂಡ ವರನು ತನ್ನ ಕೈಗಳಿಂದ ವಧುವಿಗೆ ಹೊಡೆಯುತ್ತಲೇ ಇರುತ್ತಾನೆ. ವಧುವನ್ನು ಹಿಗ್ಗಾಮುಗ್ಗ ಹೊಡೆಯುತ್ತಾನೆ. ವಧು ಕೂಡ ತಾಳ್ಮೆ ಕಳೆದುಕೊಂಡು ವರನಿಗೆ ಕಪಾಳಮೋಕ್ಷ ಮಾಡುತ್ತಾಳೆ. ಅಷ್ಟೇ ಅಲ್ಲ, ಅತಿಥಿಗಳು ಮಧ್ಯಪ್ರವೇಶಿಸಿದರೂ ಇಬ್ಬರ ಜಗಳವನನು ನಿಲ್ಲಿಸುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ತಾರಕಕ್ಕೆ ಹೋಗುತ್ತದೆ. ಮದುವೆಯ ದಿನ ನವದಂಪತಿಗಳು ಜಗಳವಾಡುತ್ತಿರುವುದನ್ನು ಕಂಡು ಅಲ್ಲಿದ್ದವರು ಬೆಚ್ಚಿಬೀಳುತ್ತಾರೆ. ಅವರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರು ಆದರೆ ವಧುವರರು ತಮ್ಮ ಜಗಳವನ್ನು ನಿಲ್ಲಿಸುವುದಿಲ್ಲ.
ಇದನ್ನೂ ಓದಿ:Audi Chaiwala: ಕೋಟಿಗಟ್ಟಲೆ ಬೆಲೆಯ ಆಡಿ ಕಾರಲ್ಲಿ ಟೀ ಅಂಗಡಿ ತೆರೆದ ವ್ಯಕ್ತಿ, ವಿಡಿಯೋ ವೈರಲ್
ಈ ವಿಡಿಯೋವನ್ನು ಮೇ 31 ರಂದು @bridal_lehenga_designn ಪುಟವು Instagram ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋವನ್ನು 33,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋ ನೋಡಿದ ಬಳಿಕ ಸಾಮಾಜಿಕ ಜಾಲತಾಣ ಬಳಕೆದಾರರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ವಧು-ವರರು ವಿಡಿಯೋದಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಊಹಿಸಿದ್ದಾರೆ. ವಧು-ವರರ ನಡುವೆ ಪರಸ್ಪರ ದ್ವೇಷವಿತ್ತು ಎಂದು ಹಲವರು ಹೇಳಿದ್ದಾರೆ. ಇನ್ನೂ ಕೆಲವರು ಇದು ಸ್ಕ್ರಿಪ್ಟೆಡ್ ವಿಡಿಯೋ ಎಂದು ಹೇಳಿದ್ದಾರೆ.
ಇದನ್ನೂ ಓದಿ:Viral Video: ಮೆಟ್ರೋದಲ್ಲಿ ಕೆಳಗೆ ಮಲಗಿ ಪ್ರೇಮಿಗಳ ರೊಮ್ಯಾನ್ಸ್.. ಮೋಹದಲ್ಲಿ ಮೈಮರೆತ ಲವರ್ಸ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.