Viral News: ಕುಡಿದು ಕಾರು ಓಡಿಸಿದ ಕಾಂಗ್ರೆಸ್ ಶಾಸಕನ ಮಗನ ವಿಡಿಯೋ ವೈರಲ್!

ಕುಡಿತ ಮತ್ತಿನಲ್ಲಿ ಕಾಂಗ್ರೆಸ್ ಶಾಸಕ ಹುಕುಂ ಸಿಂಗ್ ಕರಾದ ಅವರ ಪುತ್ರ ತನ್ನ ಕಾರಿನಿಂದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

Written by - Puttaraj K Alur | Last Updated : May 25, 2022, 04:28 PM IST
  • ಕುಡಿದ ಮತ್ತಿನಲ್ಲಿ ಕಾಂಗ್ರೆಸ್‍ ಮಾಜಿ ಸಚಿವನ ಪುತ್ರನ ಉದ್ಧಟತನ
  • ಉದ್ಯಮಿ ಕಾರಿಗೆ ಹಿಂಬಂದಿಯಿಂದ ಪದೇ ಪದೇ ಡಿಕ್ಕಿ ಹೊಡೆಸಿದ್ದಾನೆ
  • ಕುಡಿದು ಕಾರು ಓಡಿಸಿರುವ ಕಾಂಗ್ರೆಸ್ ಶಾಸಕನ ಮಗನ ವಿಡಿಯೋ ವೈರಲ್
Viral News: ಕುಡಿದು ಕಾರು ಓಡಿಸಿದ ಕಾಂಗ್ರೆಸ್ ಶಾಸಕನ ಮಗನ ವಿಡಿಯೋ ವೈರಲ್!  title=
ಕಾಂಗ್ರೆಸ್‍ ಮಾಜಿ ಸಚಿವನ ಪುತ್ರನ ಉದ್ಧಟತನ

ನವದೆಹಲಿ: ಮಧ್ಯಪ್ರದೇಶದ ಸೆಹೋರ್‍ನಲ್ಲಿ ಇಂದೋರ್ ಮೂಲದ ಉದ್ಯಮಿಯೊಬ್ಬರ ಕಾರಿಗೆ ಹಿಂಬದಿಯಿಂದ ಪದೇ ಪದೇ ಡಿಕ್ಕಿ ಹೊಡೆದ ಅಪರಿಚಿತ ಪಾನಮತ್ತ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಈ ರೀತಿ ಕಾರು ಡಿಕ್ಕಿ ಹೊಡಿಸಿರುವ ಚಾಲಕ ಕಾಂಗ್ರೆಸ್‌ನ ಮಾಜಿ ಸಚಿವ ಹುಕುಂ ಸಿಂಗ್ ಕರಾದ ಅವರ ಪುತ್ರನೆಂದು ರಾಜ್ಯ ಬಿಜೆಪಿ ಆರೋಪಿಸಿದೆ.

ವೈರಲ್ ವಿಡಿಯೋದಲ್ಲಿ ಬಹಿರಂಗ!

ಚಾಲಕ ಕುಡಿದ ಮತ್ತಿನಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರಿನ ನಂಬರ್ ನೋಡಿದರೆ ಶಾಜಾಪುರದ ಹುಕುಂ ಸಿಂಗ್ ಅವರ ಪುತ್ರ ರೋಹಿತಾಪ್ ಸಿಂಗ್‍ರ ವಾಹನವೆಂದು ತೋರಿಸಲಾಗಿದೆ. ಶನಿವಾರ ರಾತ್ರಿ ಉದ್ಯಮಿ ದಿನೇಶ್ ಅಹುಜಾ (40) ಮತ್ತು ಅವರ ಸಹಚರರು ಭೋಪಾಲ್‌ನಿಂದ ಇಂದೋರ್‌ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯನ್ನು ಕೊಂದ ಟಗರಿಗೆ ಮೂರು ವರ್ಷ ಸೆರೆವಾಸ!

ಎಚ್ಚರಿಕೆ ನೀಡಿದರೂ ಉದ್ಧಟತನ!

ವರದಿಗಳ ಪ್ರಕಾರ ಅಹುಜಾ ಅವರ ವಾಹನಕ್ಕೆ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದಿತ್ತು. ಎಚ್ಚರಿಕೆಯಿಂದ ಕಾರು ಓಡಿಸುವಂತೆ ಮನವಿ ಮಾಡಿದರೂ ಆ ವ್ಯಕ್ತಿ ಅದಕ್ಕೆ ಕ್ಯಾರೆ ಅಂದಿಲ್ಲ. ಹಲವಾರು ಬಾರಿ ಹಿಂದಿನಿಂದ ಕಾರು ಡಿಕ್ಕಿ ಹೊಡೆಸಿ ಉದ್ಧಟತನ ಮೆರೆದಿದ್ದಾನೆ. ಅಹುಜಾ ಮತ್ತು ಅವರ ಸಹಚರರು ಕೆಳಗಿಳಿದು ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಪಾನಮತ್ತ ಚಾಲಕ ಪದೇ ಪದೇ ಕಾರು ಡಿಕ್ಕಿ ಹೊಡೆಸಿ ಅಹುಜಾರ ವಾಹನವನ್ನು ಹಾನಿಗೊಳಿಸಿದ್ದಾನೆ.

ಇದನ್ನೂ ಓದಿ: Viral Image: ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ!

ಪ್ರಕರಣ ದಾಖಲು

ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಷ್ಟ ಪೊಲೀಸ್ ಠಾಣೆ ಪ್ರಭಾರಿ ಅನಿಲ್ ಯಾದವ್ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ, ‘ಉದ್ಯಮಿ ಅಹುಜಾರ ಕಾರಿಗೆ ಡಿಕ್ಕಿ ಹೊಡಿಸಿರುವ ಆರೋಪಿ ಕಾಂಗ್ರೆಸ್ ಮಾಜಿ ಸಚಿವ ಹುಕುಂ ಸಿಂಗ್ ಕರಾದ ಅವರ ಪುತ್ರ’ ಎಂದು ಆರೋಪಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾವು ಗೂಂಡಾ ರಾಜ್ ಅನ್ನು ಸಹಿಸುವುದಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News