ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಬ್ಬರು ಯುವಕರು ಸಲಿಂಗ ಮದುವೆ ಮಾಡಿಕೊಂಡಿದ್ದು, ಇದಕ್ಕೆ ಕುಟುಂಬಸ್ಥರೂ ಸಹ ಒಪ್ಪಿಗೆ ನೀಡಿದ್ದಾರೆ. ಈ ಇಬ್ಬರ ಪೈಕಿ ಒಬ್ಬಾತನಿಗೆ ಈಗಾಗಲೇ ಮದುವೆಯಾಗಿ ಪತ್ನಿಯೂ ಇದ್ದಾಳೆ. ಆದರೆ ಪ್ರೀತಿಯ ಮಡದಿಯನ್ನು ಬಿಟ್ಟು ಆತ ತಾನು ಪ್ರೀತಿಸಿದ ಯುವಕನನ್ನೇ ಮತ್ತೊಮ್ಮೆ ವಿವಾಹವಾಗಿದ್ದಾನೆ.
ಹೌದು, ಪಶ್ಚಿಮ ಬಂಗಾಳದ ಸಿಯುರಿಯ ಯುವಕ ಸಲಿಂಗಕಾಮಿ ಸಂಗಾತಿಯನ್ನು ಮದುವೆಯಾಗಲು ಹೆಂಡತಿಗೆ ಕೈಕೊಟ್ಟಿದ್ದಾನೆ. ಪ್ರೀತಿಗೆ ಜಾತಿ-ಧರ್ಮವಿಲ್ಲ ಅನ್ನೋ ಸಾಲಿನಲ್ಲಿ ಲಿಂಗವೂ ಇಲ್ಲವೆನ್ನುವಂತೆ ಸಿಯುರಿ ನಿವಾಸಿ ವಾಸುದೇವ್ ಚಕ್ರವರ್ತಿ(37) ಎಂಬಾತ ತನ್ನ ಸಂಗಾತಿ ಅಮಿತ್ ಮಲಿಕ್‌ನೊಂದಿಗೆ ಮದುವೆಯಾಗಿದ್ದಾನೆ.
ಇದನ್ನೂ ಓದಿ: Budget Session 2024: 'ಹೊಸ ಬೆಂಚ್ ಮಾರ್ಕ್ ಸೃಷ್ಟಿಸಿದ 17ನೇ ಲೋಕಸಭೆ, ಹಲವು ತಲೆಮಾರುಗಳ ನಿರೀಕ್ಷೆಗೆ ಅಂತ್ಯ'
ಹೌರಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟು ಮದುವೆ ಆಗಿದ್ದಾರೆ. ಈ ಸಲಿಂಗಿಗಳ ಮದುವೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ.
ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹದ ಕುರಿತು ಕಾನೂನು ಮಾನ್ಯತೆ ಇಲ್ಲವೆಂದು ಸುಪ್ರೀಂಕೋರ್ಟ್ ತಿಳಿಸಿದ್ದರೂ, ದೇಶದಲ್ಲಿ ಸಲಿಂಗ ಪ್ರೇಮ ಪ್ರಕರಣಗಳು ನಡೆಯುತ್ತಲೇ ಇವೆ. ಈ ಇಬ್ಬರ ಯುವಕರ ಮದುವೆಗೆ ಕುಟುಂಬಸ್ಥರು ಸಮ್ಮತಿ ನೀಡಿರುವುದು ವಿಶೇಷ. ಇದಲ್ಲದೆ ಬಂಧು-ಬಳಗ, ಸ್ನೇಹಿತರ ಸಮ್ಮುಖದಲ್ಲಿ ಸಲಿಂಗಿಗಳು ಕೈಹಿಡಿದು ಮದುವೆಯಾಗಿದ್ದಾರೆ. ಈ ಮದುವೆ ನಮಗೆ ತುಂಬಾ ಸಂತೋಷ ತಂದಿದೆ, ಸುತ್ತಮುತ್ತಲಿನ ಜನರು ಮತ್ತು ಸ್ನೇಹಿತರು ಖುಷಿ ವ್ಯಕ್ತಪಡಿಸಿ ಹಾರೈಸಿದ್ದಾರೆ ಅಂತಾ ಮನೆಯ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟ ಮಾತು
ಸಿಯುರಿಯ ಕರಿಧ್ಯದ ಸೆಂಪಾರ ನಿವಾಸಿ ವಾಸುದೇವ್ ಕೇವಲ ಒಂದು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನಂತೆ. ಆದರೆ ತನ್ನ ಹೆಂಡತಿ ಜೊತೆಗೆ ಸರಿಯಾದ ಬಾಂಧವ್ಯವಿಲ್ಲದೆ, ವೈಮನಸ್ಸಿನಿಂದ ಜಗಳಗಳಾಗುತ್ತಿತ್ತಂತೆ. ಪ್ರತಿದಿನ ನಡೆಯುತ್ತಿದ್ದ ಜಗಳದಿಂದ ಗಂಡ-ಹೆಂಡತಿ ಬೇರೆಯಾಗಲು ನಿರ್ಧರಿಸಿ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದಿದ್ದಾರೆಂದು ವರದಿಯಾಗಿದೆ. ವಾಸುದೇವ್ ಮೊದಲ ವಿವಾಹ ಕಾನೂನಿನ ಪ್ರಕಾರ ರದ್ದಾಗಿದ್ದರಿಂದ, ಆತ ಸುಲಭವಾಗಿ ಅಮಿತ್ ಜೊತೆಗೆ ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.