Pakistan Political Crisis: ಇಮ್ರಾನ್ ಖಾನ್‍ನಿಂದ 6 ಸಾವಿರ ಕೋಟಿ ಹಗರಣ- ಶಹಬಾಜ್ ಷರೀಫ್ ವಾಗ್ದಾಳಿ

ಇಮ್ರಾನ್ ಖಾನ್ ವಿರುದ್ಧ ಶೆಹಬಾಜ್ ಷರೀಫ್ ದಾಳಿ: ಇಮ್ರಾನ್ ಖಾನ್ ಅವರ ಭ್ರಷ್ಟಾಚಾರದ ಬಗ್ಗೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಏನನ್ನೂ ಹೇಳಿಲ್ಲವೆಂದು ಶೆಹಬಾಜ್ ಷರೀಫ್ ಹೇಳಿದರು. ಸುಪ್ರೀಂಕೋರ್ಟ್ ಏನು ಮಾಡಿದೆ? ಅದು ಇಮ್ರಾನ್ ಖಾನ್ ಅವರ ಗುರಾಣಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಕೊಲೆ ಮಾಡಲಾಗಿದೆ. ಮೇ 9ರ ದಿನ ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

Written by - Puttaraj K Alur | Last Updated : May 12, 2023, 09:45 PM IST
  • ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ವಾಗ್ದಾಳಿ
  • ಇಮ್ರಾನ್ ಖಾನ್ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದು, ನಾವು ಅವರನ್ನು ದೀರ್ಘಕಾಲ ಸಹಿಸಿಕೊಂಡಿದ್ದೇವೆ
  • ದೇಶದ ಇಂದಿನ ಸ್ಥಿತಿಗೆ 6 ಸಾವಿರ ಕೋಟಿ ಹಗರಣ ಮಾಡಿರುವ ಇಮ್ರಾನ್ ಖಾನ್ ನೇರ ಕಾರಣ
Pakistan Political Crisis: ಇಮ್ರಾನ್ ಖಾನ್‍ನಿಂದ 6 ಸಾವಿರ ಕೋಟಿ ಹಗರಣ- ಶಹಬಾಜ್ ಷರೀಫ್ ವಾಗ್ದಾಳಿ title=
ಇಮ್ರಾನ್ ವಿರುದ್ಧ ಶೆಹಬಾಜ್ ವಾಗ್ದಾಳಿ!

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಪುಟ ಸಭೆಯ ನಂತರ ಇಮ್ರಾನ್ ಗುರಿಯಾಗಿಸಿ ಆಕ್ರೋಶ ವ್ಯಕ್ತಪಡಿಸಿದ ಶೆಹಬಾಜ್, ‘ಪಿಟಿಐ ನಾಯಕತ್ವವು ದೇಶವನ್ನು ವಿನಾಶದತ್ತ ತಳ್ಳುತ್ತಿದೆ’ ಎಂದು ಹೇಳಿದರು. ತೋಷಖಾನಾ ಪ್ರಕರಣದಲ್ಲಿ ದೊಡ್ಡ ಆರೋಪ ಮಾಡಿದ ಅವರು, ‘ಇಮ್ರಾನ್ ಖಾನ್ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ನಾವು ಅವರನ್ನು ದೀರ್ಘಕಾಲ ಸಹಿಸಿಕೊಂಡಿದ್ದೇವೆ. ದೇಶದ ಇಂದಿನ ಸ್ಥಿತಿಗೆ ಇಮ್ರಾನ್ ಖಾನ್ ಅವರೇ ನೇರ ಕಾರಣ. ಅವರು 6 ಸಾವಿರ ಕೋಟಿ ರೂ. ಹಗರಣ ಮಾಡಿದ್ದಾರೆಂದು ಗುಡುಗಿದ್ದಾರೆ.

ದೇಶದ ಕರೆನ್ಸಿ ಈ ಸಮಯದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದೆ. ನಾವು ಹಿಂದಿನ ಸರ್ಕಾರದಿಂದ ಪಡೆದ ಸವಾಲುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ. ಹಿಂದಿನ ಸರ್ಕಾರ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದು, ನಾವು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇಮ್ರಾನ್ ಅವರ ಭ್ರಷ್ಟಾಚಾರದ ಬಗ್ಗೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಏನನ್ನೂ ಹೇಳಿಲ್ಲ. ಸುಪ್ರೀಂಕೋರ್ಟ್ ಏನು ಮಾಡಿದೆ, ಅದು ಇಮ್ರಾನ್ ಖಾನ್ ಅವರ ಗುರಾಣಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಕೊಲೆ ಮಾಡಲಾಗಿದೆ. ಮೇ 9ರ ದಿನ ದೇಶಕ್ಕೆ ನಾಚಿಕೆಗೇಡಿನ ಸಂಗತಿ. ಇಮ್ರಾನ್ ದೇಶದ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಶೆಹಬಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mehbooba Mufti: ಭಾರತೀಯ ಮಾಧ್ಯಮ ಹಾಗೂ ನ್ಯಾಯ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ ಮೆಹಬೂಬಾ ಮುಫ್ತಿ ಹೇಳಿದ್ದೇನು?

ವಿಚಾರಣೆ ಶೀಘ್ರದಲ್ಲೇ ಪ್ರಾರಂಭ: ಮತ್ತೊಂದೆಡೆ ಇಸ್ಲಾಮಾಬಾದ್ ಹೈಕೋರ್ಟ್‌ನ ವಿಶೇಷ ಪೀಠವು ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಘೋಷಣೆಗಳ ನಡುವೆ ಮುಂದೂಡಿತು. ಸ್ವಲ್ಪ ಸಮಯದ ನಂತರ ವಿಚಾರಣೆ ಪುನರಾರಂಭವಾಗುತ್ತದೆ. ಇಮ್ರಾನ್ ಖಾನ್ ವಿರುದ್ಧ ನ್ಯಾಶನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಬಂಧನ ವಾರಂಟ್ ಹೊರಡಿಸಿದ ನಂತರ ಅಲ್-ಖಾದಿರ್ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಕಾಂಪ್ಲೆಕ್ಸ್‌ನಿಂದ ಮಂಗಳವಾರ ಅವರನ್ನು ಬಂಧಿಸಲಾಯಿತು.

ಪಾಕಿಸ್ತಾನದಲ್ಲಿ ಉಗ್ರ ಪ್ರತಿಭಟನೆ: ಇಮ್ರಾನ್ ಖಾನ್ ಅವರನ್ನು ಅರೆಸೈನಿಕ ರೇಂಜರ್‌ಗಳು ಬಂಧಿಸಿದರು, ನಂತರ ಪಾಕಿಸ್ತಾನದಾದ್ಯಂತ ಬೃಹತ್ ಪ್ರತಿಭಟನೆಗಳು ಪ್ರಾರಂಭವಾದವು. ಇದರಿಂದಾಗಿ ಇಸ್ಲಾಮಾಬಾದ್ ಜೊತೆಗೆ ಪಂಜಾಬ್, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಸೇನೆಯನ್ನು ನಿಯೋಜಿಸಬೇಕಾಯಿತು.

ಇದನ್ನೂ ಓದಿ: ಇಮ್ರಾನ್ ಖಾನ್ ಬಂಧಿಸದಂತೆ ನಿರ್ಬಂಧ ಹೇರಿದ ಇಸ್ಲಾಮಾಬಾದ್ ಹೈಕೋರ್ಟ್

ಇಮ್ರಾನ್ ಖಾನ್ ಬಂಧನವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ, ಆದರೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಇಮ್ರಾನ್‌ಗೆ ದೊಡ್ಡ ರಿಲೀಫ್ ನೀಡಿತು. ಅವರ ಬಂಧನವನ್ನು ಕಾನೂನುಬಾಹಿರವೆಂದು ಪರಿಗಣಿಸಿ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತು. ಇದಾದ ಬಳಿಕ ಇಮ್ರಾನ್‌ನನ್ನು ಸುಪ್ರೀಂಕೋರ್ಟ್‌ನ ರಕ್ಷಣೆಯಲ್ಲಿ ಇರಿಸುವಂತೆ ಹಾಗೂ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಹೈಕೋರ್ಟ್‌ಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಶುಕ್ರವಾರ ನ್ಯಾಯಮೂರ್ತಿ ಮಿಯಾಂಗುಲ್ ಹಸನ್ ಔರಂಗಜೇಬ್ ಮತ್ತು ನ್ಯಾಯಮೂರ್ತಿ ಸಮನ್ ರಫತ್ ಇಮ್ತಿಯಾಜ್ ಅವರ ವಿಶೇಷ ಪೀಠವು ಇಮ್ರಾನ್ ಅವರ ಜಾಮೀನು ಅರ್ಜಿಯ ವಿಚಾರಣೆ ಪ್ರಾರಂಭಿಸಿತು. ಭದ್ರತಾ ಕಾರಣಗಳಿಂದ ಸುಮಾರು 2 ಗಂಟೆಗಳ ಕಾಲ ತಡವಾಗಿ ವಿಚಾರಣೆ ಆರಂಭವಾಯಿತು. ವಕೀಲರೊಬ್ಬರು ಘೋಷಣೆಗಳನ್ನು ಎತ್ತಿದ ನಂತರ ಇಬ್ಬರೂ ನ್ಯಾಯಾಧೀಶರು ನ್ಯಾಯಾಲಯದಿಂದ ಹೊರನಡೆದರು. ಕೋಪಗೊಂಡ ನ್ಯಾಯಾಧೀಶರು ಶುಕ್ರವಾರದ ಪ್ರಾರ್ಥನೆಯ ನಂತರ ವಿಚಾರಣೆಯನ್ನು ಪುನರಾರಂಭಿಸುವುದಾಗಿ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News