ವಸತಿ ಶಾಲೆ ಕರ್ಮಕಾಂಡ ಭೇದಿಸಿದ ಜೀ ಕನ್ನಡ ನ್ಯೂಸ್, ಶಿಕ್ಷಕರೆಲ್ಲಾ ಅಮಾನತು

ಅದು ಪೋಷಕರಿಂದ ದೂರವಿದ್ದು ಮಕ್ಕಳು ವಿದ್ಯೆ ಕಲಿಯುವ ಜ್ನಾನ ದೇಗುಲವದು, ಆದರೆ ಶಿಕ್ಷಕರೇ ಪೊಷಕರಂತೆ ಇದ್ದು ಮಕ್ಕಳನ್ನು ನೋಡಿಕೊಳ್ಳ ಬೇಕಾದ ಶಿಕ್ಷಕರೇ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಮಕ್ಕಳಿಗೆ ಚಿತ್ರ ವಿಚಿತ್ರವಾಗಿ ಹಿಂಸಿಸಿ ಖುಷಿಪಟ್ಟು ವಿಕೃತಿ ಮೆರೆದಿದ್ದಾರೆ, ಇಂಥಾದೊಂದು ವಸತಿ ಶಾಲೆಯ ಕರ್ಮಕಾಂಡ ಕುರಿತು ಜೀ ಕನ್ನಡ ನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಆ ಶಿಕ್ಷಕರೆಲ್ಲವರೂ ಅಮಾನತ್ತಾಗಿ ಮನೆಗೆ ಹೋಗಿದ್ದಾರೆ.

Written by - Zee Kannada News Desk | Last Updated : Dec 17, 2023, 07:04 PM IST
  • ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕಿರುಕುಳವನ್ನು ಹಂಚಿಕೊಂಡರು.
  • ಇಷ್ಟೇಲ್ಲಾ ನಡೆದ ನಂತರ ಸ್ಥಳಕ್ಕೆ ಬಂದ ಪ್ರಾಂಶುಪಾಲೆ ಭಾರತಮ್ಮ ಕೂಡಾ ಇದು ಶಾಲೆಯಲ್ಲಿ ನಡೆಯುತ್ತಿರುವ ಶಿಕ್ಷಕರ ನಡುವಿನ ಗುಂಪುಗಾರಿಕೆಯನ್ನು ಒಪ್ಪಿಕೊಂಡರು.
  • ಅಲ್ಲದೆ ಮಕ್ಕಳಿಗೆ ನೀಡುತ್ತಿರುವ ಕಿರುಕುಳವನ್ನು ಒಪ್ಪಿಕೊಂಡರು.
ವಸತಿ ಶಾಲೆ ಕರ್ಮಕಾಂಡ ಭೇದಿಸಿದ ಜೀ ಕನ್ನಡ ನ್ಯೂಸ್, ಶಿಕ್ಷಕರೆಲ್ಲಾ ಅಮಾನತು title=
ಸಾಂಧರ್ಭಿಕ ಚಿತ್ರ

ಕೋಲಾರ: ಅದು ಪೋಷಕರಿಂದ ದೂರವಿದ್ದು ಮಕ್ಕಳು ವಿದ್ಯೆ ಕಲಿಯುವ ಜ್ನಾನ ದೇಗುಲವದು, ಆದರೆ ಶಿಕ್ಷಕರೇ ಪೊಷಕರಂತೆ ಇದ್ದು ಮಕ್ಕಳನ್ನು ನೋಡಿಕೊಳ್ಳ ಬೇಕಾದ ಶಿಕ್ಷಕರೇ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಮಕ್ಕಳಿಗೆ ಚಿತ್ರ ವಿಚಿತ್ರವಾಗಿ ಹಿಂಸಿಸಿ ಖುಷಿಪಟ್ಟು ವಿಕೃತಿ ಮೆರೆದಿದ್ದಾರೆ, ಇಂಥಾದೊಂದು ವಸತಿ ಶಾಲೆಯ ಕರ್ಮಕಾಂಡ ಕುರಿತು ಜೀ ಕನ್ನಡ ನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಆ ಶಿಕ್ಷಕರೆಲ್ಲವರೂ ಅಮಾನತ್ತಾಗಿ ಮನೆಗೆ ಹೋಗಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಅಭಿಷೇಕ್​ ಬಚ್ಚನ್ ಗಿಂತ ಎಷ್ಟು ವರ್ಷ ದೊಡ್ಡವರು ಗೊತ್ತೇ!

ಮಲದ ಗುಂಡಿಯೊಳಗೆ ಇಳಿದು ಕ್ಲೀನ್​ ಮಾಡುತ್ತಿರುವ ಮಕ್ಕಳು, ಇನ್ನೊಂದೆಡೆ ರಾತ್ರಿಯಲ್ಲಿ ಮಕ್ಕಳ ಹೆಗಲಿಗೆ ಬ್ಯಾಗ್ ಹೊರಿಸಿ ಕೈ ಮೇಲೆತ್ತಿ ಕೂರಿಸಿ ವಿಚಿತ್ರ ಶಿಕ್ಷೆಕೊಟ್ಟು ವಿಕೃತಿ ಮೆರೆಯುತ್ತಿರುವ ಶಿಕ್ಷಕ, ಇನ್ನೊಂದೆಡೆ ವಸತಿ ಶಾಲೆಯ ಶಿಕ್ಷಕರ ವಿರುದ್ದ ಆಕ್ರೋಶ ಹೊರಹಾಕುತ್ತಿರುವ ಪೊಷಕರು ಈ ಎಲ್ಲಾ ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರದಲ್ಲಿ. ಹೌದ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಯಲವಳ್ಳಿ ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಂದಲ್ಲ ಎರಡಲ್ಲಾ ಹತ್ತಾರು ಕರ್ಮಕಾಂಡಗಳು ನಡೆದು ಹೋಗಿವೆ, ಇಲ್ಲಿನ ಶಿಕ್ಷಕರ ನಡುವಿನ ಗುಂಪುಗಾರಿಕೆಯಿಂದ ಶಿಕ್ಷಕರೇ ಮೃಗಗಳಂತಾಗಿ ಮಕ್ಕಳಿಗೆ ಚಿತ್ರ ಹಿಂಸೆ ನೀಡಿದ್ದಾರೆ, ಸರಿಯಾಗಿ ಊಟ ತಿಂಡಿ ಕೊಡದೆ, ಮಕ್ಕಳಿಗೆ ಚಿತ್ರ ವಿಚಿತ್ರವಾಗಿ ಹಿಂಸೆ ಮಾಡಿ ವಿಕೃತಿ ಮೆರೆದಿದ್ದಾರೆ. ಅದೆಲ್ಲದಕ್ಕೂ ಮಿಗಿಲಾಗಿ ಮಾನವೀಯ ಸಮಾಜವೇ ತಲೆ ತಗ್ಗಿಸುವಂತೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್​ ಮಾಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಷಯ ತಿಳಿಯುತ್ತಿದ್ದಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕರ್ಮಕಾಂಡ ಕುರಿತು ಜೀ ಕನ್ನಡ ನ್ಯೂಸ್ ವಿಸೃತ ವರದಿಯನ್ನು ಪ್ರಸಾರ ಮಾಡಿತ್ತು, ಅಲ್ಲದೆ ಅಲ್ಲಿನ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕಾದ ಮುನಿಯಪ್ಪ, ಅಭಿಷೇಕ್​, ಸೇರಿದಂತೆ ವಾರ್ಡನ್​ ಮಂಜುನಾಥ್ ಅವರು ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಕುರಿತು ವಿಡಿಯೋ ಸಮೇತ ವರದಿ ಪ್ರಸಾರ ಮಾಡಿತ್ತು, ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​.ಸಿ.ಮಹದೇವಪ್ಪ ಕೂಡಲೇ ಆ ವಿಕೃತಿ ಮೆರೆದ ಪ್ರಾಂಶುಪಾಲೆ ಹಾಗೂ ಶಿಕ್ಷಕರನ್ನು ವಾರ್ಡನ್​ ರನ್ನು ಅಮಾನತ್ತು ಮಾಡಿ ತನಿಖೆಗೆ ಆದೇಶ ಮಾಡಿದ್ರು. ಅಲ್ಲದೆ ಅವರ ಮೇಲೆ ಕ್ರಿಮಿನಲ್​ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರಿಗೆ ಅವಮಾನ: ನಟ ಚೇತನ್‌ ಅಹಿಂಸಾ ವಿರುದ್ದ FIR ದಾಖಲು!

ಇನ್ನು ಇಷ್ಟಕ್ಕೆ ಬಿಡದೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಯಲವಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬೇಟಿ ನೀಡಿತ್ತು, ಯಾವಾಗ ಜೀ ಕನ್ನಡ ನ್ಯೂಸ್ ನಲ್ಲಿ ವಸತಿ ಶಾಲೆಯ ಕುರಿತು ವರದಿ ಪ್ರಸಾರವಾಗಿತ್ತೋ ಅದನ್ನು ಕಂಡು ಮಕ್ಕಳ ಪೊಷಕರು ಶಾಲೆಯ ಬಳಿಗೆ ಓಡೋಡಿ ಬಂದಿದ್ರು, ಅಲ್ಲದೆ ಇಲ್ಲಿನ ಪ್ರಾಂಶುಪಾಲೆ ಭಾರತಮ್ಮ ಸೇರಿದಂತೆ ಇಲ್ಲಿನ ಶಿಕ್ಷಕರ ಮೇಲೆ ಆಕ್ರೋಶ ಹೊರಹಾಕಿದ್ರು, ಇಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳಿಗೆ ನೀಡುತ್ತಿರುವ ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ರು. ಅಲ್ಲದೆ ಕೂಡಲೇ ಪ್ರಾಂಶುಪಾಲೆ ಹಾಗೂ ಶಿಕ್ಷಕರನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸಿದ್ರು. ಜೊತೆಗೆ ಈ ವಸತಿ ಶಾಲೆಯಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಹೆಣ್ಣುಮಕ್ಕಳ ಕೆಲವು ಪೋಟೋಗಳನ್ನು ಬೇರೆಯವರಿಗೆ ತೆಗೆದು ಕಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ರು. ಇಷ್ಟೆಲ್ಲಾ ಬೆಳವಣಿಗೆಯ ನಂತರ ವಸತಿ ಶಾಲೆಗೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಾಧೀಶ ಸುನಿಲ್ ಹೊಸಮನಿ ಯವನು ಖುದ್ದು ಬೇಟಿ ನೀಡಿ​ ಎಲ್ಲವನ್ನೂ ಪರಿಶೀಲನೆ ನಡೆಸಿದ್ರು ಅಲ್ಲದೆ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಮಾಹಿತಿ ಕಲೆ ಹಾಕಿದ್ರು. ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕಿರುಕುಳವನ್ನು ಹಂಚಿಕೊಂಡರು. ಇಷ್ಟೇಲ್ಲಾ ನಡೆದ ನಂತರ ಸ್ಥಳಕ್ಕೆ ಬಂದ ಪ್ರಾಂಶುಪಾಲೆ ಭಾರತಮ್ಮ ಕೂಡಾ ಇದು ಶಾಲೆಯಲ್ಲಿ ನಡೆಯುತ್ತಿರುವ ಶಿಕ್ಷಕರ ನಡುವಿನ ಗುಂಪುಗಾರಿಕೆಯನ್ನು ಒಪ್ಪಿಕೊಂಡರು. ಅಲ್ಲದೆ ಮಕ್ಕಳಿಗೆ ನೀಡುತ್ತಿರುವ ಕಿರುಕುಳವನ್ನು ಒಪ್ಪಿಕೊಂಡರು. ಇನ್ನು ಸ್ಥಳಕ್ಕೆ ವಸತಿ ಶಿಕ್ಷಣ ಸಂಸ್ಥೆಯ ಎಕ್ಸೂಟಿವ್​ ಡೈರೆಕ್ಟರ್​ (ಕಾರ್ಯನಿರ್ವಾಹಕ ನಿರ್ದೇಶಕ) ನವೀನ್ ಕುಮಾರ್​ ರಾಜು ಕೂಡಾ ವಸತಿ ಶಾಲೆಗೆ ಬೇಟಿ ನೀಡಿ ಪ್ರಾಂಶುಪಾಲರು, ಸಿಬ್ಬಂದಿ, ಮಕ್ಕಳೊಂದಿಗೆ ಮಾತುಕತೆ ನಡೆಸಿದ್ರು.

ಒಟ್ಟಾರೆ ಹಲವು ತಿಂಗಳುಗಳಿಂದ ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯುತ್ತಿದ್ದ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಕಿರುಕುಳಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ, ಅಲ್ಲದೆ ಮಕ್ಕಳಿಗೆ ಕಿರುಕುಳ ನೀಡಿದವರಿಗೆ ತಕ್ಷ ಶಾಸ್ತಿಯಾಗಿದ್ದು, ವಸತಿ ಶಾಲೆಯ ಮಕ್ಕಳು ಹಾಗೂ ಮಕ್ಕಳಿಂದ ದೂರವಿರುವ ಪೊಷಕರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News