Bath after having Sex: ಸೆಕ್ಸ್ ಮಾಡಿದ ತಕ್ಷಣ ಸ್ನಾನ ಮಾಡಿದರೆ ಪ್ರೆಗ್ನೆನ್ಸಿ ತಡೆಯಬಹುದೇ?

Bath after having Sex: ಕಾಂಡೋಮ್ ಇಲ್ಲದೆ ಸಂಭೋಗ ನಡೆಸಿದ ನಂತರ ಹೆಣ್ಣು ತನ್ನ ಯೋನಿಯನ್ನು ಬಿಸಿ ನೀರು ಮತ್ತು ಸಾಬೂನಿನಿಂದ ತೊಳೆದರೆ ಅವಳಿಗೆ ಗರ್ಭಪಾತವಾಗುವ ಸಂಭವವಿದೆಯೇ ಎಂಬುದು ಕೆಲವರ ಪ್ರಶ್ನೆ. ಆದರೆ ಇದಕ್ಕೆ ತಜ್ಞರು ನೀಡಿರುವ ಉತ್ತರ ಹೀಗಿದೆ.

Written by - Bhavishya Shetty | Last Updated : Apr 7, 2023, 08:30 PM IST
    • ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕ ಹೆಣ್ಣು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು
    • ಸೆಕ್ಸ್ ಮಾಡಿದ ತಕ್ಷಣ ಸ್ನಾನ ಮಾಡಿದರೆ ಗರ್ಭಪಾತವಾಗುತ್ತದೆಯೇ?
    • ಅಸುರಕ್ಷಿತ ಸಂಭೋಗದ ನಂತರ ಯೋನಿಯನ್ನು ತೊಳೆಯುವುದರಿಂದ ಗರ್ಭಪಾತವಾಗುವುದಿಲ್ಲ
Bath after having Sex: ಸೆಕ್ಸ್ ಮಾಡಿದ ತಕ್ಷಣ ಸ್ನಾನ ಮಾಡಿದರೆ ಪ್ರೆಗ್ನೆನ್ಸಿ ತಡೆಯಬಹುದೇ?  title=
Health Tips

Bath after having Sex: ಉತ್ತಮ ಸಂಬಂಧದಲ್ಲಿ ಗಂಡ ಹೆಂಡತಿ ಅಥವಾ ಪ್ರೇಮಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕ ಹೆಣ್ಣು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವರಲ್ಲಿ ಇಂದಿಗೂ ಒಂದು ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ ಸೆಕ್ಸ್ ಮಾಡಿದ ತಕ್ಷಣ ಸ್ನಾನ ಮಾಡಿದರೆ ಗರ್ಭಪಾತವಾಗುತ್ತದೆಯೇ? ಎಂಬುದು. ಈ ಸಂಬಂಧ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ ! ಮೊಸರು ಬಳಸಿ ಮನೆಯಲ್ಲಿಯೇ ತಯಾರಿಸಿ ಹೇರ್ ಸ್ಟ್ರೈಟ್ ನಿಂಗ್ ಕ್ರೀಂ !

ಕಾಂಡೋಮ್ ಇಲ್ಲದೆ ಸಂಭೋಗ ನಡೆಸಿದ ನಂತರ ಹೆಣ್ಣು ತನ್ನ ಯೋನಿಯನ್ನು ಬಿಸಿ ನೀರು ಮತ್ತು ಸಾಬೂನಿನಿಂದ ತೊಳೆದರೆ ಅವಳಿಗೆ ಗರ್ಭಪಾತವಾಗುವ ಸಂಭವವಿದೆಯೇ ಎಂಬುದು ಕೆಲವರ ಪ್ರಶ್ನೆ. ಆದರೆ ಇದಕ್ಕೆ ತಜ್ಞರು ನೀಡಿರುವ ಉತ್ತರ ಹೀಗಿದೆ.

ಅಸುರಕ್ಷಿತ ಸಂಭೋಗದ ನಂತರ ಯೋನಿಯನ್ನು ತೊಳೆಯುವುದರಿಂದ ಗರ್ಭಪಾತವಾಗುವುದಿಲ್ಲ ವಾಸ್ತವವಾಗಿ ಅದು ವೀರ್ಯವನ್ನು ಗರ್ಭಕಂಠದ ಮೂಲಕ ಮತ್ತಷ್ಟು ಮೇಲಕ್ಕೆ ತಳ್ಳುವ ಸಾಧ್ಯತೆಯಿದೆ, ಇದರಿಂದಾಗಿ ವೀರ್ಯವು ಮೊಟ್ಟೆಯೊಂದಿಗೆ ಸೇರಲು ಇನ್ನಷ್ಟು ಸುಲಭವಾಗುತ್ತದೆ ಎಂದು ಹೇಳುತ್ತಾರೆ.

ಸೆಕ್ಸ್ ಬಳಿಕ ಸ್ನಾನ ಮಾಡಿದರೆ ಗರ್ಭಧಾರಣೆಯ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇದು ಮುಖ್ಯವಾಗಿ ಯೋನಿಯ ಹೊರಗಿನ ವೀರ್ಯವನ್ನು ತೊಳೆಯುತ್ತದೆ ಹೊರತು ಒಳಗಿನ ವೀರ್ಯಗಳನ್ನು ಏನೂ ಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.

ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಲೈಂಗಿಕತೆಯ ನಂತರ ತಕ್ಷಣವೇ ಸ್ನಾನ ಮಾಡುವುದು ಒಳ್ಳೆಯದು ಎಂದು ಯೇಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌’ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಕ್ಲಿನಿಕಲ್ ಪ್ರೊಫೆಸರ್ ಮೇರಿ ಜೇನ್ ಮಿಂಕಿನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ವೈಟ್‌ ಹೆಡ್ಸ್‌ ತೆಗೆದುಹಾಕುಲು ಇಲ್ಲಿವೆ ಸುಲಭ ಮಾರ್ಗಗಳು..!

ಗರ್ಭಕಂಠದಲ್ಲಿ ಶೇಖರಣೆಯಾದ ವೀರ್ಯವು ಕೇವಲ 2 ನಿಮಿಷಗಳಲ್ಲಿ ಫಾಲೋಪಿಯನ್ ಟ್ಯೂಬ್‌ ಗಳಿಗೆ ತೆರಳುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ನೀವು ಶವರ್ ನಲ್ಲಿಯನ್ನು ಆನ್ ಮಾಡುವ ಹೊತ್ತಿಗೆ ಗರ್ಭಧಾರಣೆಗೆ ಸಿದ್ಧವಾಗಿರುವ ವೀರ್ಯವು ಅದರ ಸ್ಥಳಕ್ಕೆ ಅದಾಗಲೇ ಸೇರಿರುತ್ತದೆ ಎಂದು ಅವರು ಹೇಳುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News