ನವದೆಹಲಿ: ಮಹಾಶಿವರಾತ್ರಿ ಹಬ್ಬವು ಭಗವಾನ್ ಶಿವನಿಗೆ ಅರ್ಪಿತವಾಗಿದೆ. ಈ ದಿನ ಶಿವನನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಶಿವನನ್ನು ವಿಧಿ-ವಿಧಾನಗಳ ಮೂಲಕ ಪೂಜಿಸುವುದರಿಂದ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಈ ವರ್ಷ ಮಹಾಶಿವರಾತ್ರಿ ಹಬ್ಬವನ್ನು ಫೆ.18ರ ಶನಿವಾರ ಆಚರಿಸಲಾಗುವುದು. ಮಹಾಶಿವರಾತ್ರಿ ಹಬ್ಬದಂದು ನೀವು ನಿಮ್ಮ ಸ್ನೇಹಿತರು ಬಂಧು-ಬಾಂಧವರೊಂದಿಗೆ ಇಲ್ಲಿರುವ ಶುಭಾಶಯಗಳು & ಸಂದೇಶಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಶುಭ ಕೋರಿಬಹುದು.
ಇದನ್ನೂ ಓದಿ: Mahashivratri 2023: ಮಹಾಶಿವರಾತ್ರಿಯಂದು ಈ ಹಣ್ಣುಗಳನ್ನು ಅರ್ಪಿಸಬೇಡಿ, ಶಿವನು ಕೋಪಗೊಳ್ಳುತ್ತಾನೆ.!
ಮಹಾಶಿವರಾತ್ರಿಯ ಶುಭಾಶಯಗಳು:
- ಶಿವ.. ಶಿವ ಎಂದರೆ ಭಯವಿಲ್ಲ. ಶಿವ ನಾಮಕೆ ಸಾಟಿ ಬೇರಿಲ್ಲ... ನಿಮಗೂ ನಿಮ್ಮ ಕುಟುಂಬಕ್ಕೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಭಗವಾನ್ ಶಿವನು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ನೀಡಲಿ. ನಿಮಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು!
- ಭಗವಾನ್ ಶಿವನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಶೀರ್ವಾದ ನೀಡಲಿ. ಮಹಾ ಶಿವರಾತ್ರಿಯ ಶುಭಾಶಯಗಳು!
- ಭಗವಾನ್ ಶಿವನ ದೈವಿಕ ಆಶೀರ್ವಾದ ಸದಾಕಾಲ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ... ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಮಹಾಶಿವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ ಶಿವನ ದಿವ್ಯ ಆಶೀರ್ವಾದ ನಿಮ್ಮೊಂದಿಗಿರಲಿ. ನಿಮಗೂ & ನಿಮ್ಮ ಕುಟುಂಬದವರಿಗೂ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯ ವಾತಾವರಣವಿರಲಿ. ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
- ಮಹಾಶಿವರಾತ್ರಿಯ ಶುಭ ಮಹೋತ್ಸವದ ಶುಭ ಸಂದರ್ಭದಲ್ಲಿ ಪರಶಿವನ ಆಶೀರ್ವಾದ ಸದಾ ನಿಮೊಂದಿಗಿರಲಿ. ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಭಗವಾನ್ ಶಿವನು ನಿಮಗೆ ಪ್ರೀತಿ ಮತ್ತು ಶಕ್ತಿಯನ್ನು ನೀಡಲಿ. ಸುಖ-ಸಂತೋಷ ಮತ್ತು ಶಾಂತಿಯನ್ನು ನೀಡಲಿ. ನಿಮ್ಮ ಕುಟುಂಬಕ್ಕೆ ಶಿವನ ಸಕಲ ಆಶೀರ್ವಾದವೂ ಸಿಗಲಿ. ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
- ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಶಿವ ಮತ್ತು ಪಾರ್ವತಿ ದೇವಿಯೂ ಎಲ್ಲರನ್ನೂ ಹರಸಲಿ ಈ ಹಬ್ಬ ಪ್ರತಿಯೊಬ್ಬರಿಗೂ ಖುಷಿ ತರಲಿ. ನಿಮ್ಮ ಸಕಲ ಇಷ್ಟಾರ್ಥಗಳು ಈಡೇರಲಿ. ನಿಮ್ಮೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು..
- ಭಗವಾನ್ ಶಿವನ ಅನುಗ್ರಹ ನಾಡಿನ ಸಮಸ್ತ ಜನತೆಯ ಮೇಲಿರಲಿ. ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಇದನ್ನೂ ಓದಿ: Mahashivratri 2023 Wishes : ಮಹಾಶಿವರಾತ್ರಿಯಂದು ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸುವ ಮೂಲಕ ಶುಭಕೋರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.