ನವದೆಹಲಿ: ಪ್ರತಿ ವರ್ಷ ಫಾಲ್ಗುಣ ಚತುರ್ದಶಿಯಂದು ಮಹಾಶಿವರಾತ್ರಿಯ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿ ಹಬ್ಬವನ್ನು ಫೆಬ್ರವರಿ 18ರಂದು ಆಚರಿಸಲಾಗುವುದು. ಈ ಹಬ್ಬವನ್ನು ಶಿವ ಮತ್ತು ತಾಯಿ ಪಾವರ್ತಿಗೆ ಸಮರ್ಪಿಸಲಾಗಿದೆ. ಈ ದಿನದಂದು ಮಹಾದೇವ ಮತ್ತು ಮಾತೆ ಗೌರಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ಮತ್ತು ದುಃಖಗಳು ದೂರವಾಗುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ 18ರಂದು ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಸೂರ್ಯ ಮತ್ತು ಶುಕ್ರರು ಕುಂಭ ರಾಶಿಯಲ್ಲಿ ಕುಳಿತಿದ್ದಾರೆ ಮತ್ತು ಫೆಬ್ರವರಿ 18ರಂದು ಚಂದ್ರನು ಕೂಡ ಕುಂಭ ರಾಶಿಯಲ್ಲಿ ಸಾಗುತ್ತಾನೆ. ಈ ಸಮಯವು ಕೆಲವು ರಾಶಿಗಳಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಲಿದೆ.
ಮಿಥುನ ರಾಶಿ: ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಮಿಥುನ ರಾಶಿಯ ಜನರು ಮಹಾಶಿವರಾತ್ರಿಯಂದು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ರಾಶಿಯ ಜನರಿಗೆ ಗ್ರಹಗಳ ಚಲನೆಯು ಅನುಕೂಲಕರವಾಗಿರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತಾರೆ. ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ವ್ಯಕ್ತಿಯ ಗೌರವದಲ್ಲಿ ಹೆಚ್ಚಳವಾಗುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಇದನ್ನೂ ಓದಿ: Astro Tips: ಅಪಾರ ಹಣ-ಸಂಪತ್ತು ಪಡೆಯಲು ಇಂದೇ ಈ ಸುಲಭ ಪರಿಹಾರ ಮಾಡಿ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಹಾಶಿವರಾತ್ರಿ ಹಬ್ಬವು ಮಂಗಳಕರವೆಂದು ಪರಿಗಣಿಸಲಾಗಿದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವಿದೆ. ಸಂಪತ್ತು ಮತ್ತು ಧಾನ್ಯಗಳಲ್ಲಿ ಹೆಚ್ಚಳವಾಗುತ್ತದೆ. ನೀವು ಆಸ್ತಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿದೆ. ಧನ ಲಾಭ ಇರುತ್ತದೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ.
ಧನು ರಾಶಿ: ಮಹಾಶಿವರಾತ್ರಿಯಂದು ಧನು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ನೀವು ಯಾರೊಂದಿಗಾದರೂ ಹಣದ ವಹಿವಾಟು ನಡೆಸಿದರೆ, ಈ ಸಮಯ ಅನುಕೂಲಕರವಾಗಿರುತ್ತದೆ. ಸಾಲದ ಸುಳಿಯಲ್ಲಿ ಸಿಲುಕಿದ ಹಣವನ್ನು ಮರಳಿ ಪಡೆಯಬಹುದು. ಹೂಡಿಕೆಗೆ ಇದು ಉತ್ತಮ ಸಮಯ. ಆದಾಯ ಹೆಚ್ಚಳಕ್ಕೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಈ ಸಮಯದಲ್ಲಿ ವ್ಯಾಪಾರ ತಂತ್ರಗಳು ಸಹ ಬಹಳ ಫಲಪ್ರದವಾಗುತ್ತವೆ. ಗೌರವ ಮತ್ತು ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ.
ಇದನ್ನೂ ಓದಿ: Akshaya Tritiya 2023 : ಅಕ್ಷಯ ತೃತೀಯ ದಿನ ಈ ವಸ್ತು ದಾನ ಮಾಡಿ, ಹೊಸ ಕೆಲಸ ಪ್ರಾರಂಭಿಸಿ ಯಶಸ್ವಿಯಾಗುತ್ತೀರಿ!
ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಪಡೆಯುತ್ತಾರೆ. ಯೋಜನೆಗಳು ಮತ್ತು ತಂತ್ರಗಳಲ್ಲಿ ಯಶಸ್ಸು ಇರುತ್ತದೆ. ಉದ್ಯೋಗದ ಬಗ್ಗೆ ಚಿಂತಿತರಾಗಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಇನ್‌ಕ್ರಿಮೆಂಟ್ ಮತ್ತು ಬಡ್ತಿ ಸಿಗುವ ಭರವಸೆ ಇದೆ. ಶಿಕ್ಷಣ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಒಳ್ಳೆಯ ಸುದ್ದಿ ಪಡೆಯಬಹುದು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.