Shani Jayanti Impact: ನಾಳೆಯಿಂದ ಈ ರಾಶಿಯವರಿಗೆ ಹಣದ ಸುರಿಮಳೆ

Shani Jayanti: ನಾಳೆ, 19 ಮೇ 2023ರಂದು ಶನಿ ಜಯಂತಿ ಇರಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶನಿ ಜಯಂತಿಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೂ, ಈ ಬಾರಿಯ ಶನಿ ಜಯಂತಿಯು 5 ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಅವರ ಅದೃಷ್ಟವೇ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : May 18, 2023, 09:55 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾತ್ಮನನ್ನು ಮೆಚ್ಚಿಸಲು ಶನಿ ಜಯಂತಿಯನ್ನು ತುಂಬಾ ವಿಶೇಷ ಎಂದು ನಂಬಲಾಗಿದೆ.
  • ಅದರಲ್ಲೂ ಶನಿ ಜಯಂತಿಯಂದು ರೂಪುಗೊಳ್ಳುತ್ತಿರುವ ವಿಶೇಷ ರಾಜಯೋಗವು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ.
  • ಆದಾಗ್ಯೂ, ಶನಿ ಜಯಂತಿಯ ದಿನ ನಿರ್ಮಾಣಗೊಳ್ಳುತ್ತಿರುವ ಶುಭ ಯೋಗಗಳು ಐದು ರಾಶಿಯವರ ಜೀವನದಲ್ಲಿ ಸುಖ, ಸಂಪತ್ತು, ಯಶಸ್ಸನ್ನು ನೀಡಲಿದೆ.
Shani Jayanti Impact: ನಾಳೆಯಿಂದ ಈ ರಾಶಿಯವರಿಗೆ ಹಣದ ಸುರಿಮಳೆ  title=
Shubha Yogas on Shani Jayanti

Shani Jayanti Impact: ಪ್ರತಿ ವರ್ಷ ಜ್ಯೇಷ್ಠ ಅಮಾವಾಸ್ಯೆಯ ದಿಂದ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನಾಳೆ ಎಂದರೆ 19 ಮೇ 2023ರ ಶುಕ್ರವಾರದಂದು ಶನಿ ಜಯಂತಿ ಆಚರಣೆ ಇರಲಿದೆ. ಈ ಬಾರಿಯ ಶನಿ ಜಯಂತಿಯಂದು ಶನಿ ದೇವನು ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿದ್ದು ಶತ ರಾಜಯೋಗವನ್ನು ನಿರ್ಮಿಸುತ್ತಿದ್ದಾನೆ.  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾತ್ಮನನ್ನು ಮೆಚ್ಚಿಸಲು ಶನಿ ಜಯಂತಿಯನ್ನು ತುಂಬಾ ವಿಶೇಷ ಎಂದು ನಂಬಲಾಗಿದೆ. ಅದರಲ್ಲೂ ಶನಿ ಜಯಂತಿಯಂದು ರೂಪುಗೊಳ್ಳುತ್ತಿರುವ ವಿಶೇಷ ರಾಜಯೋಗವು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದಾಗ್ಯೂ, ಶನಿ ಜಯಂತಿಯ ದಿನ ನಿರ್ಮಾಣಗೊಳ್ಳುತ್ತಿರುವ ಶುಭ ಯೋಗಗಳು ಐದು ರಾಶಿಯವರ ಜೀವನದಲ್ಲಿ ಸುಖ, ಸಂಪತ್ತು, ಯಶಸ್ಸನ್ನು ನೀಡಲಿದೆ. ಅವರ ಜೀವನದ ಅದೃಷ್ಟವೇ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

ಶನಿ ಜಯಂತಿ ಪ್ರಭಾವ- ನಾಳೆಯಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಭಾರೀ ಅದೃಷ್ಟ:-
ವೃಷಭ ರಾಶಿ: 

ಈ ಬಾರಿಯ ಶನಿ ಜಯಂತಿಯನ್ನು ವೃಷಭ ರಾಶಿಯವರಿಗೆ ತುಂಬಾ ಶುಭ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಶನಿ ಹಾಗೂ ವೃಷಭ ರಾಶಿಯ ಅಧಿಪತಿಯಾದ ಶುಕ್ರ ಇಬ್ಬರೂ ಸಹ ಮಿತ್ರ ಗ್ರಹಗಳು. ಹಾಗಾಗಿ, ಶನಿ ಈ ರಾಶಿಯವರಿಗೆ ಸದಾ ಸನ್ಮಂಗಳವನ್ನೇ ತೋರುತ್ತಾನೆ. ಶನಿ ಜಯಂತಿಯ ಫಲವಾಗಿ, ಈ ರಾಶಿಯವರ ಆದಾಯ ಹೆಚ್ಚಳವಾಗಲಿದ್ದು ಜೀವನದಲ್ಲಿ ಸುಖ, ಶಾಂತಿ ನೆಲೆಸಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Shani Mahadasha ನೀಡಲಿದೆ ಬಂಪರ್ ಲಾಭ: ಮುಂದಿನ 19 ವರ್ಷಗಳವರೆಗೆ ಇವರಿಗೆ ರಾಜ ಯೋಗ!

ಕರ್ಕಾಟಕ ರಾಶಿ: 
ಶನಿ ದೇವನು ನಾಳೆಯಿಂದ ಕರ್ಕಾಟಕ ರಾಶಿಯವರ ಜೀವನದಲ್ಲಿ ಅದೃಷ್ಟವನ್ನೇ ಬದಲಾಯಿಸಲಿದ್ದಾನೆ. ಈ ಸಮಯದಲ್ಲಿ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಪ್ರಮುಖ ಕೆಲಸಗಳಿಗೆ ಚಾಲನೆ ದೊರೆಯಲಿದ್ದು ನಿಮ್ಮ ಕನಸು ನನಸಾಗಲಿದೆ. ವೃತ್ತಿ ಬದುಕಿನಲ್ಲಿಯೂ ಕೂಡ ಅತ್ಯುತ್ತಮ ಸಮಯ ಇದಾಗಿದೆ ಎಂದು ಹೇಳಬಹುದು. 

ತುಲಾ ರಾಶಿ: 
ತುಲಾ ರಾಶಿಯವರಿಗೂ ಕೂಡ ಶುಕ್ರನೇ ಅಧಿಪತಿ. ಹಾಗಾಗಿ, ಶನಿ ಮಹಾತ್ಮ ಈ ರಾಶಿಯವರಿಗೂ ಸಹ ಉತ್ತಮ ಫಲಗಳನ್ನೇ ನೀಡುತ್ತಾರೆ. ಈ ಬಾರಿಯ ಶನಿ ಜಯಂತಿಯ ಪರಿಣಾಮವಾಗಿ ತುಲಾ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ಇದರಿಂದ ನೀವು ಸಮಾಜದಲ್ಲಿ ಕೀರ್ತಿ, ಗೌರವವನ್ನೂ ಪಡೆಯುತ್ತೀರಿ. 

ಮಕರ ರಾಶಿ: 
ಶನಿಯೇ ಮಕರ ರಾಶಿಯ ಅಧಿಪತಿ ಗ್ರಹವೂ ಆಗಿದ್ದು ಸದಾ ಈ ರಾಶಿಯವರ ಮೇಲೆ ಶನಿಯ ದಯೆ ಇರುತ್ತದೆ. ನಾಳೆ ಶನಿ ಜಯಂತಿಯಿಂದ ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದ್ದು  ಈ ರಾಶಿಯವರು ಉದ್ಯೋಗ ವ್ಯವಹಾರದಲ್ಲಿ ಭಾರೀ ಲಾಭವನ್ನು ಗಳಿಸುತ್ತಾರೆ. ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳೂ ಕೂಡ ಹೆಚ್ಚಲಿವೆ. 

ಇದನ್ನೂ ಓದಿ- ಶನಿ ಜಯಂತಿಯಂದು ಅಪರೂಪದ 3 ರಾಜಯೋಗಗಳು, ಈ 3 ರಾಶಿಯವರಿಗೆ ಸಿರಿವಂತರಾಗುವ ಯೋಗ

ಕುಂಭ ರಾಶಿ: 
ಕುಂಭ ರಾಶಿಯ ಅಧಿಪತಿಯಾಗಿರುವ ಶನಿಯು ಮೂವತ್ತು ವರ್ಷಗಳ ಬಳಿಕ ಈ ರಾಶಿಗೆ ಪ್ರವೇಶಿಸಿದ್ದಾನೆ. ಪ್ರಸ್ತುತ, ಇದೇ ರಾಶಿಯಲ್ಲಿ ನಾಳೆ ಶಶರಾಜ ಯೋಗವೂ ನಿರ್ಮಾಣಗೊಳ್ಳುತ್ತಿದ್ದು ಇದರ ಗರಿಷ್ಠ ಪ್ರಯೋಜನವನ್ನು ಕುಂಭ ರಾಶಿಯವರು ಪಡೆಯಲಿದ್ದಾರೆ. ಈ ಸಮಯದಲ್ಲಿ ಕುಂಭ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದ್ದು, ಬಹು ದಿನದ ಕನಸುಗಳು ಈಡೇರಲಿವೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News