ಇನ್ನು 139 ದಿನ ಈ ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ! ಹೆಜ್ಜೆ ಹೆಜ್ಜೆಗೂ ಇರಲಿ ಎಚ್ಚರ !

Shani Vakri Negative Impact : ಜೂನ್ 17, 2023 ರಿಂದ, ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತದೆ. ಕುಂಭ ರಾಶಿಯಲ್ಲಿಯೇ ಶನಿಯ ಹಿಮ್ಮುಖ ಚಲನೆ ಇರಲ್ಲಿದೆ. ನವೆಂಬರ್ 4 ರವರೆಗೆ ಶನಿಯು ಹಿಮ್ಮುಖವಾಗಿಯೇ ಚಲಿಸುತ್ತಿರುತ್ತಾನೆ. 

Written by - Ranjitha R K | Last Updated : Apr 20, 2023, 04:48 PM IST
  • ಶನಿ ಗ್ರಹ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ.
  • ಹಿಮ್ಮುಖವಾಗಿ ಚಲಿಸಿದಾಗ ಅದನ್ನು ಶನಿ ವಕ್ರಿ ಎನ್ನಲಾಗುತ್ತದೆ
  • 5 ರಾಶಿಯವರ ಜೀವನದಲ್ಲಿ ಅಶುಭ ಫಲಿತಾಂಶಗಳನ್ನು ನೀಡಲಿದ್ದಾನೆ.
ಇನ್ನು 139 ದಿನ ಈ ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ! ಹೆಜ್ಜೆ ಹೆಜ್ಜೆಗೂ ಇರಲಿ ಎಚ್ಚರ !  title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ನ್ಯಾಯದ ದೇವರು ಮತ್ತು ಕರ್ಮ ಫಲದಾತ ಎಂದು ಕರೆಯಲ್ಪಡುವ ಶನಿ ಗ್ರಹ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ.  ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಶನಿಯು ಹಿಮ್ಮುಖವಾಗಿ ಚಲಿಸಿದಾಗ ಅದನ್ನು ಶನಿ ವಕ್ರಿ ಎಂದು ಕರೆಯಲಾಗುತ್ತದೆ. ಪ್ರಸ್ತುತ, ಶನಿಯು ನೇರವಾಗಿ ಚಲಿಸುತ್ತಿದ್ದು, ಜೂನ್ 17, 2023 ರಿಂದ, ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತದೆ. ಕುಂಭ ರಾಶಿಯಲ್ಲಿಯೇ ಶನಿಯ ಹಿಮ್ಮುಖ ಚಲನೆ ಇರಲ್ಲಿದೆ. ನವೆಂಬರ್ 4 ರವರೆಗೆ ಶನಿಯು ಹಿಮ್ಮುಖವಾಗಿಯೇ ಚಲಿಸುತ್ತಿರುತ್ತಾನೆ.  ಶನಿಯ ಹಿಮ್ಮುಖ ಚಲನೆಯು ಎಲ್ಲಾ ರಾಶಿಯವರ ಜಾತಕದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಕುಂಭ ರಾಶಿಯಲ್ಲಿ ವಕ್ರಿಯಾಗಿರುವ ಶನಿ 5 ರಾಶಿಯವರ ಜೀವನದಲ್ಲಿ  ಅಶುಭ ಫಲಿತಾಂಶಗಳನ್ನು ನೀಡಲಿದ್ದಾನೆ. 

 ಈ ರಾಶಿಯವರಿಗೆ ಕಷ್ಟ : 
ಮೇಷ ರಾಶಿ- ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಕಠಿಣ ಪರಿಶ್ರಮ ಪಟ್ಟರೂ ಕಡಿಮೆ ಫಲಿತಾಂಶಗಳನ್ನು ಪಡೆಯುತ್ತೀರಿ. ಆರೋಗ್ಯದತ್ತ ವಿಶೇಷ ಗಮನ ಕೊಡಿ. ಆರೋಗ್ಯ ಹದಗೆಡಬಹುದು. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ವಿವಾದಗಳು ಉಂಟಾಗಬಹುದು. 

ಇದನ್ನೂ ಓದಿ : Akshaya Tritiya: ಅಕ್ಷಯ ತೃತೀಯದಲ್ಲಿ ನಿಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ಖರೀದಿಸಿ

ವೃಷಭ ರಾಶಿ - ಶನಿಯ ಹಿಮ್ಮುಖ ಚಲನೆಯು ವೃಷಭ ರಾಶಿಯವರನ್ನು ಕೂಡಾ ಕಂಗೆಡಿಸುತ್ತದೆ. ಈ ಸಮಯದಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಉದ್ಯೋಗಗಳನ್ನು ಹುಡುಕುತ್ತಿರುವವರು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಮನೆಯ ಸದಸ್ಯರ ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ. 

ಕರ್ಕಾಟಕ ರಾಶಿ- ಶನಿಗ್ರಹವು ಕರ್ಕಾಟಕ ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಈ ರಾಶಿಯ ಜನರ ಮೇಲೆ ಈಗಾಗಲೇ ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿದೆ.  ಈ ಸಮಯದಲ್ಲಿ, ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮಾನಸಿಕವಾಗಿ ಕಿರಿಕಿರಿ ಉಂಟಾಗಬಹುದು.  

ತುಲಾ ರಾಶಿ- ಹಿಮ್ಮುಖ ಶನಿಯು ತುಲಾ ರಾಶಿಯವರಿಗೆ ತೊಂದರೆ ಕೊಡುತ್ತಾನೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.  ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಸ್ವಲ್ಪ ಸಮಯ ಕಾಯಿರಿ. ಈ ಸಮಯ ಸರಿಯಿಲ್ಲ. ಜೀವನದ ವಿಷಯದಲ್ಲಿ ತಾಳ್ಮೆಯಿಂದಿರಿ. 

ಇದನ್ನೂ ಓದಿ : Food Astrology: ನಾವು ಸೇವಿಸುವ ಆಹಾರದಿಂದ ಕೂಡ ನಮ್ಮ ಭಾಗ್ಯ ಬದಲಾಗುತ್ತದೆ ಗೊತ್ತಾ?

ಕುಂಭ ರಾಶಿ-  ಕುಂಭ ರಾಶಿಯವರ ಜಾತಕದಲ್ಲಿಯೂ ಸಾಡೇ ಸಾತಿ ನಡೆಯುತ್ತಿದ್ದು, ಹಿಮ್ಮುಖ ಚಲನೆಯು ಈ ರಾಶಿಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆರೋಗ್ಯ ಮತ್ತು ವೃತ್ತಿ ವಿಷಯಗಳ ಬಗ್ಗೆ ಜಾಗರೂಕರಾಗಿರಿ. ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು.  

 

(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News