ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ ಅಂತಾ ಆರೋಪ ಮಾಡಿ ರಾಜಕೀಯ ಮಾಡೋದನ್ನು ನೋಡಿರ್ತೀರಿ. ಆದ್ರೆ ಇಲ್ಲೊಬ್ಬ ಮಾಜಿ ಶಾಸಕ, ಎಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಕೊಟ್ರೆ ಶಾಸಕರಿಗೆ ಹೆಸರು ಬಂದುಬಿಡುತ್ತದೆ ಅಂತಾ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಬೀಳುತ್ತೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಗಲಾಟೆಯಾಗಲು ಏಕೆ ಅವಕಾಶಕೊಡಬೇಕು ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಕಂಗೆಟ್ಟು ಆರ್ಥಿಕ ಪರಿಸ್ಥಿತಿಯಿಂದ ನೊಂದಿದ್ದ ಜನಸಮಾನ್ಯರು ನಾಡಿನೆಲ್ಲಡೆ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ರಾಜ್ಯದ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಲ್ಲಿ ಒಂದಾದ ತುಮಕೂರು ಜಿಲ್ಲೆ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯ ಕೊರೊನಾ ಕರಿ ಛಾಯೆಯಿಂದ ಹೊರ ಬಂದಿದ್ದು, ಎಂದಿನಂತೆ ತಾಯಿಯ ದರ್ಶನ ಭಾಗ್ಯ ಭಕ್ತರಿಗೆ ಲಭ್ಯವಾಗಿದೆ. ಅಷ್ಟೇ ಸಡಗರದಲ್ಲಿ ದೂರದ ಊರುಗಳಿಂದಲೂ ಭಕ್ತರು ಬಂದು ತಾಯಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು
ತುಮಕೂರಿನ ಪಾವಗಡ ತಾಲೂಕು ಆಸ್ಪತ್ರೆ ಕರ್ಮಕಾಂಡ ಬಯಲಾಗಿದೆ. ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ರೋಗಿಗಳು ಪರದಾಡುವಂತಾಗಿದೆ. ಮಳೆಯಿಂದ ನಿನ್ನೆ ರಾತ್ರಿ 4 ಗಂಟೆ ಕಾಲ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಜನರೇಟರ್ ಇದ್ದರೂ ಸಿಬ್ಬಂದಿ ಆನ್ ಮಾಡಿಲ್ಲ. ಇದರಿಂದಾಗಿ ನಡುರಾತ್ರಿ ಕರೆಂಟ್ ಇಲ್ಲದೇ ನೂರಾರು ರೋಗಿಗಳ ಪರದಾಡುವಂತಾಯ್ತು.
ತುಮಕೂರು ಜಿಲ್ಲೆಯ ಮಧುಗಿರಿಗೆ ಏಕಶಿಲಾ ಬೆಟ್ಟದಲ್ಲಿ ಸಿಲುಕಿದ್ದ ತಂದೆ, ಮಗನನ್ನು ರಕ್ಷಣೆ ಮಾಡಲಾಗಿದೆ. ತಂದೆ, ಮಗ ಬೆಟ್ಟ ನೋಡೋದಕ್ಕಾಗಿ ಬೆಂಗಳೂರಿಂದ ಬಂದಿದ್ದರು. ಬೆಟ್ಟ ಹತ್ತು ವೇಳೆ ಜೋರು ಮಳೆ ಶುರುವಾಗಿದೆ. ಇದರಿಂದ ಆತಂಕಗೊಂಡ ಇಬ್ಬರು ಮೇಲೆ ಹತ್ತಲು ಆಗದೆ ಕೆಳಗೆ ಇಳಿಯಲು ಆಗದೆ ಸಂಕಟಕ್ಕೆ ಸಿಲುಕಿದ್ದರು. ತ್ರಿಶಂಕು ಸ್ಥಿತಿಯಲ್ಲಿದ್ದ ತಂದೆ ಮಧುಗಿರಿ ಪೊಲೀಸರಿಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ತಾರಕಕ್ಕೇರುತ್ತಿರೋ ಪಠ್ಯ ಪುಸ್ತಕ ವಿವಾದ ಹಿನ್ನೆಲೆ ಪಠ್ಯ ಪುಸ್ತಕದ ವಿಷಯ ಈಗಾಗಲೇ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಪಠ್ಯ ಪುಸ್ತಕಗಳಲ್ಲಿ ನೈತಿಕ ಶಿಕ್ಷಣದ ಕೊರತೆ ಹೆಚ್ಚು ಕಾಣ್ತಾ ಇದೆ. ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿಕೆ
ಅಜಯ್ ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ. ಇಂಗ್ಲಿಷ್ ಓದಲು ಕಷ್ಟವಾಗುತ್ತದೆ. ಶಾಲೆಗೆ ಹೋಗಲ್ಲ ಎಂದು ಮನೆಯಲ್ಲಿ ಹಠ ಮಾಡಿದ್ದ. ಆದರೆ ಶಾಲೆಗೆ ಹೋಗುವಂತೆ ಪೋಷಕರು ತಿಳಿ ಹೇಳಿದ್ದರು.
ತುಮಕೂರಿನ ಕುಣಿಗಲ್ ತಾಲೂಕಿನ ಹೆರೂರು ಮೂಲದವರಾಗಿದ್ದ ಲಕ್ಷ್ಮೀ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇನ್ನು ಮಂಗಳವಾರದಂದು ಸಂಪ್ಗೆ ನೀರು ತುಂಬಿಸಲು ಮೋಟಾರ್ ಚಾಲು ಮಾಡುವ ಸಂದರ್ಭದಲ್ಲಿ ಕರೆಂಟ್ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ತುಮಕೂರು ತಾಲ್ಲೂಕಿನ ಜಕ್ಕೆನಹಳ್ಳಿಯ ಗುಗ್ರಿಮಾರಮ್ಮ ಹಾಗೂ ಮುತ್ತುರಾಯಸ್ವಾಮಿ ಜಾತ್ರಾ ಮಹೋತ್ಸವ ವೈಭದಿಂದ ನೇರವೇರಿತು. ಕಂಬಯ್ಯನನ್ನ ಕರೆತರುವ ಮೂಲಕ ಜಾತ್ರೆ ಆರಂಭವಾಯ್ತು. ಗುಗ್ರಿಮಾರಮ್ಮ ಹಾಗೂ ಮುತ್ತುರಾಯಸ್ವಾಮಿಯನ್ನ ರಥದ ಮೇಲಿರಿಸಿ ರಥೋತ್ಸವ ನಡೆಸಲಾಯಿತು. ಇದೇ ವೇಳೆ ಯುವಕನೊಬ್ಬ ಅಪ್ಪು ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.