ಬರಗಾಲದ ಜಿಲ್ಲೆ ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಆ ಕೆಲಸವನ್ನು ನಾವು ಮಾಡ್ತಾ ಇದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಕಚೇರಿಗೆ ಭೇಟಿ ನೀಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರು .. ಕಾರ್ಯಕರ್ತರ ಜೊತೆ ಕಚೇರಿಗೆ ಆಗಮಿಸಿದ ಆಲಗೂರು .. ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ ಹಾಕುವ ಸಾಧ್ಯತೆ
ಕಾಂಗ್ರೆಸ್ ಕಚೇರಿ ಸುತ್ತಮುತ್ತ ಖಾಕಿ ಸರ್ಪಗಾವಲು
ವಿಜಯಪುರ ನಗರದಲ್ಲಿ ಮತ್ತೆ ಭೂಮಿ ಕಂಪಿಸಿದೆ. ನಗರದ ಸಾಯಿ ಪಾರ್ಕ್, ಗೋಕುಲ ಪಾರ್ಕ್, ಸಮರ್ಥ ನಗರ ಸೇರಿದಂತೆ ಬಹುತೇಕ ಕಡೆ ಕಂಪನದ ಅನುಭವವಾಗಿದೆ. ಭೂಕಂಪನದ ಭಯದಿಂದ ಮನೆಗಳಿಂದ ಜನ ಹೊರ ಓಡಿ ಬಂದಿದ್ದಾರೆ.
ಒಳ ಒಪ್ಪಂದ ಇರೋವರೆಗೂ ಕಾಂಗ್ರೆಸ್ ಉದ್ಧಾರ ಆಗಲ್ಲ ಎಂದು ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ಶಾಸಕರ ಸಮ್ಮುಖದಲ್ಲಿಯೇ ಪಕ್ಷದ ಹಿರಿಯ ಮುಖಂಡ, ದಲಿತ ನಾಯಕ ಚಂದ್ರಶೇಖರ ಕೊಡಬಾಗಿ ಈ ಮುಜುಗರದ ಹೇಳಿಕೆಯನ್ನ ನೀಡಿದ್ದಾರೆ.
ಜನಿಸಿದ ಕೂಡಲೇ ಹೆಣ್ಣು ಮಗುವನ್ನು ಮುಳ್ಳಿನ ಕಂಟೆಯಲ್ಲಿ ಬಿಸಾಕಿ ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಾಣಕಾರಗಲ್ಲಿ ಸಮೀಪದಲ್ಲಿ ಹಾವುಗಳ ಸರಸವಾಡಿವೆ. ಈ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜನ ಕೌತುಕದಿಂದ ಈ ದೃಶ್ಯ ಕಣ್ತುಂಬಿಕೊಂಡಿದ್ದಾರೆ..
ಆರ್ಆರ್ಪಿ ಎಂಬ ಹಿಂದೂ ಸಂಘಟನೆ ಕಾರ್ಯಕರ್ತರು ಇಂದು ವಿಜಯಪುರದ ಗೋಲಗುಮ್ಮಟಕ್ಕೆ ಭೇಟಿ ನೀಡಿದ್ದ ವೇಳೆ ʼಕಟ್ಟಿದೆವು ಕಟ್ಟಿದೆವು, ರಾಮ ಮಂದಿರ ಕಟ್ಟಿದೆವು. ಜೈ ಶ್ರೀರಾಮ ಜೈ ಶ್ರೀರಾಮ" ಎಂದು ಘೋಷಣೆ ಕೂಗಿದ್ದಾರೆ.
ಅನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತೆ. ಈ ಯೋಜನೆಗಳನ್ನ ಬಂದ್ ಮಾಡಿ. ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ. ದೇವರ ಹಿಪ್ಪರಗಿ ಶಾಸಕರ ಮೇಲೆ ಸಿಎಂ ಗೆ ಲವ್ ಇದೆ ಎಂದು ಚಟಾಕಿ ಹಾರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.