Astro Tips: ಲಾಲ್ ಕಿತಾಬ್‌ನ ಈ ಸಲಹೆ ಪಾಲಿಸಿದ್ರೆ ನಿಮ್ಮ ಬಡತನ ದೂರವಾಗಿ ಸಿರಿವಂತಿಕೆ ಹೆಚ್ಚುತ್ತದೆ!

Lal Kitab Astro Tips: ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗದೇ ಇದ್ದಲ್ಲಿ ಅಥವಾ ಏನಾದರೂ ಅಡೆತಡೆಗಳು ಎದುರಾದರೆ, ನೀವು ಪ್ರತಿ ಮಂಗಳವಾರ ವಿಧಿವಿಧಾನಗಳೊಂದಿಗೆ ದೇವರನ್ನು ಪೂಜಿಸಬೇಕು ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಬೇಕು.

Written by - Puttaraj K Alur | Last Updated : Jan 4, 2023, 07:04 PM IST
  • ನಿಮ್ಮ ಮನೆಯಲ್ಲಿ ಮಾಡುವ ಮೊದಲ ರೊಟ್ಟಿಯನ್ನು ಹಸುವಿಗೆ, ಕೊನೆಯ ರೊಟ್ಟಿಯನ್ನು ನಾಯಿಗೆ ನೀಡಬೇಕು
  • ಸಮಸ್ಯೆಗಳ ನಿವಾರಣೆಗೆ ಪ್ರತಿದಿನ ಬೇಗನೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು
  • ಗುರುವಾರ ಹರಿವಿಷ್ಣುವಿನ ಪೂಜೆಯ ನಂತರ ತುಳಸಿಗೆ ಹಾಲನ್ನು ಅರ್ಪಿಸಲು ಮರೆಯಬೇಡಿ
Astro Tips: ಲಾಲ್ ಕಿತಾಬ್‌ನ ಈ ಸಲಹೆ ಪಾಲಿಸಿದ್ರೆ ನಿಮ್ಮ ಬಡತನ ದೂರವಾಗಿ ಸಿರಿವಂತಿಕೆ ಹೆಚ್ಚುತ್ತದೆ! title=
ಲಾಲ್ ಕಿತಾಬ್ ಪರಿಹಾರಗಳು

ನವದೆಹಲಿ: ಸಾಮಾನ್ಯವಾಗಿ ಜನರು ತಮ್ಮ ವೃತ್ತಿ ಮತ್ತು ಜೀವನದಲ್ಲಿ ಯಶಸ್ಸಿಗೆ ನಿರಂತರ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಬಯಸಿದ ಫಲಿತಾಂಶ ಸಿಗುವುದಿಲ್ಲ. ನೀವು ಕಡಿಮೆ ಶ್ರಮದಿಂದ ಉತ್ತಮ ಫಲಿತಾಂಶ  ಪಡೆಯುವುದು ಅನಿವಾರ್ಯವಲ್ಲ, ಕೆಲವೊಮ್ಮೆ ಕೆಲ ನಿರ್ಧಾರಗಳು ನಮ್ಮ ಅದೃಷ್ಟವನ್ನು ಅವಲಂಬಿಸಿರುತ್ತದೆ. ಅಂತಹ ಕೆಲವು ಯಶಸ್ಸಿನ ಕ್ರಮಗಳ ಬಗ್ಗೆ ಲಾಲ್ ಕಿತಾಬ್‌ನಲ್ಲಿ ಹೇಳಲಾಗಿದೆ.

ಮಂಗಳವಾರ ಈ ಪರಿಹಾರ ಮಾಡಿ

ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗದೇ ಇದ್ದಲ್ಲಿ ಅಥವಾ ಏನಾದರೂ ಅಡೆತಡೆಗಳು ಎದುರಾದರೆ, ನೀವು ಪ್ರತಿ ಮಂಗಳವಾರ ವಿಧಿವಿಧಾನಗಳೊಂದಿಗೆ ಪೂಜಿಸಬೇಕು ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಬೇಕು.

ತಿಜೋರಿಯಲ್ಲಿ ಕೆಂಪು ಬಟ್ಟೆ ಇರಿಸಿ

ಬಹುತೇಕ ಜನರಿಗೆ ಹಣ ಬರುತ್ತದೆ, ಆದರೆ ಅದು ನಿಲ್ಲುವುದಿಲ್ಲ. ಈ ಸಮಸ್ಯೆಗೆ ನೀವು ಕೆಂಪು ಬಟ್ಟೆಯಲ್ಲಿ ಸ್ವಲ್ಪ ಪೂಜೆ ಮಾಡಿದ ಅಕ್ಕಿಯನ್ನು ನಿಮ್ಮ ಭಂಡಾರ ಅಂದರೆ ತಿಜೋರಿಯಲ್ಲಿಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣವು ನಿಲ್ಲುತ್ತದೆ ಮತ್ತು ದೇವರ ಆಶೀರ್ವಾದವೂ ಸಹ ಸದಾ ನಿಮ್ಮ ಮೇಲೆ ಇರುತ್ತದೆ.

ಇದನ್ನೂ ಓದಿ: ಮಕರ ರಾಶಿಯಲ್ಲಿ ಸೂರ್ಯ ಸಂಚಾರ: ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ, ಹಣದ ಮಳೆಯಾಗಲಿದೆ

ಹಸು ಮತ್ತು ನಾಯಿಗೆ ಆಹಾರ ನೀಡಿ

ನಿಮ್ಮ ಮನೆಯಲ್ಲಿ ಮಾಡುವ ಮೊದಲ ರೊಟ್ಟಿಯನ್ನು ಹಸುವಿಗೆ ಮತ್ತು ಕೊನೆಯ ರೊಟ್ಟಿಯನ್ನು ನಾಯಿಗೆ ನೀಡಿ. ಹೀಗೆ ಮಾಡಿದ್ರೆ ಅದೃಷ್ಟವು ದೊರೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ನೀವು ಪ್ರತಿದಿನ ಹಸು ಮತ್ತು ನಾಯಿಗೆ ಆಹಾರ ನೀಡಬೇಕು.  

ಸೂರ್ಯ ದೇವರಿಗೆ ನೀರು ಅರ್ಪಿಸಿ

ಜೀವನದ ತೊಂದರೆಗಳನ್ನು ಕೊನೆಗೊಳಿಸಲು, ಪ್ರತಿದಿನ ಬೇಗನೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ. ಇದರ ನಂತರ ನಿಮ್ಮ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಲ್ಪ ಹಾಲು, ಸಕ್ಕರೆ ಮಿಠಾಯಿ ಮತ್ತು ಗಂಗಾಜಲವನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಹಾಗೂ ಮನೆಯಲ್ಲಿ ಧನ-ಧಾನ್ಯಗಳಿಗೆ ಕೊರತೆಯಾಗುವುದಿಲ್ಲ.

ಇದನ್ನೂ ಓದಿMakar Sankrati 2023 : ಶನಿಯ ದೋಷದಿಂದ ಮುಕ್ತಿ ಪಡೆಯಲು, ಮಕರ ಸಂಕ್ರಾಂತಿ ದಿನ ಈ ವಸ್ತುಗಳನ್ನು ದಾನ ಮಾಡಿ!

ತಾಯಿ ತುಳಸಿಗೆ ಹಾಲು ಅರ್ಪಿಸಿ

ಗುರುವಾರ ಹರಿವಿಷ್ಣುವಿನ ಪೂಜೆಯ ನಂತರ ತುಳಸಿಗೆ ಹಾಲನ್ನು ಅರ್ಪಿಸಲು ಮರೆಯಬೇಡಿ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಪ್ರಸನ್ನಳಾಗುತ್ತಾಳೆ. ಇದರೊಂದಿಗೆ ಮನೆಯ ಬಡತನ ಕೊನೆಯಾಗ ಹಣದ ಹರಿವು ಹೆಚ್ಚಾಗುತ್ತದೆ.  

(ವಿಶೇಷ ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News